ಇದು ಬಿಳಿ ಕುಸುಮಾಲೆ. ಗುಡ್ಡದ ಮೇಲೆ ಹಿಂಡುಗಳಲ್ಲಿ ಇರುವುದು ಕೆಂಪು ಕುಸುಮಾಲೆ. ಎರಡೂ ಓಕೆ. ಬಿಳಿ ಕುಸುಮಾಲೆ ಬೇರು ಬಿಳಿಮುಟ್ಟು(ವೈಟ್ ಡಿಸ್ಚಾರ್ಜ್) ಇರುವವರಿಗೆ ಸ್ವಚ್ಚವಾದ ಅಂದರೆ ೨ನೇ ಬಾರಿ ಅಕ್ಕಿ ತೊಳೆದ ದಪ್ಪ ನೀರಿನಲ್ಲಿ ತೇಯ್ದು ಕೊಟ್ಟರೆ ಬಹುಬೇಗ ಕಡಿಮೆ ಆಗುತ್ತದೆ ಹಾಗೇ ಮೂತ್ರದಲ್ಲಿ ಧಾತು ಹೋಗುವವರಿಗೆ ಕೂಡಾ ಒಳ್ಳೆಯದು ಎಂದು ಹಿರಿಯರು ಹೇಳಿದ್ದು ಕೇಳಿದ್ದೆ.
ಹಾಗೇ ಕೆಂಪು ಕುಸುಮಾಲೆ ಬೇರನ್ನು ತರಿಸಿಕೊಂಡು ನನ್ನ ಆಯಿ ಕಡ್ಲಂಗಡ್ಲೆ ಬೇರಿನ ಜೊತೆ ಹಾಕಿ ಕಷಾಯ ಬತ್ತಿಸಿ ಪ್ರತಿದಿನ ಹಾಲಿಗೆ ಹಾಕಿ ಕುಡಿಯುತ್ತಿದುದನ್ನು ನೋಡಿದ್ದೆ. ಅದು ಅತಿಯಾದ ರಕ್ತಸ್ರಾವದಿಂದ ರಕ್ತ ಅಂದರೆ ಹಿಮೊಗ್ಲೋಬಿನ್ ಕಡಿಮೆ ಆದರೆ ಸರಿಪಡಿಸಿಕೊಳ್ಳಲು ತುಂಬಾ ಉತ್ತಮ ಪರಿಣಾಮ ಕೊಡುತ್ತದೆ ಎಂದು ಹೇಳುತ್ತಿದ್ದರು. ಹಾಗೇ ತುಂಬಾ ಪರಿಮಳದ ಗುಲಾಬಿ ಬಣ್ಣದ ಕಷಾಯ ಅದಾಗಿತ್ತು.
ನಾನು ನಮ್ಮ ಮನೆಯಲ್ಲಿ ಅತ್ತೆಯ ಕಾಲದಿಂದ ಅಂದರೆ ಸುಮಾರು ೩೦ ವರ್ಷಗಳಿಂದ ಬಿಳಿ ಕುಸುಮಾಲೆ ಗಿಡ ಇರುವುದನ್ನು ನಡಿದ್ದೆ. ಅತ್ತೆ ಅದರ ಹೂವಿನ ತಂಬ್ಳಿ ಮಾಡುತ್ತಿದ್ದರು.
ನನಗೆ ಈಗ ಸುಮಾರು ೧೫ ವರ್ಷಗಳ ಹಿಂದೆ ಯಾರು ಹೇಳಿದ್ದು ನೆನಪಿಲ್ಲ, ಆದರೆ ಬಾಯಿಹುಣ್ಣಿಗೆ ಹೆಬ್ಬಾರರಿಗೆ, ಮಕ್ಕಳಿಗೆ ಇದರ ಪ್ರಯೋಗ ಅದ್ಭುತ ಯಶಸ್ಸು ಕಂಡಿದ್ದಂತೂ ಸತ್ಯ. ಈವರೆಗೆ ಮತ್ತೆ ಬಾಯಿಹುಣ್ಣಿನ ಬಾಧೆ ಅವರನ್ನು ಕಾಡಿಲ್ಲ.
ತಿಂಗಳಿಗೆ ೨೫ ದಿನ ಅವರಿಗೆ ಬಾಯಿ ಹುಣ್ಣು ಆಗುತ್ತಲೇ ಇರುತ್ತಿತ್ತು. ರಾತ್ರಿ ಮಲಗುವಾಗ ಹಲ್ಲುಜ್ಜಿ ಮುಗಿದ ಮೇಲೆ ಈ ಬಿಳಿಕುಸುಮಾಲೆಯ ಮೊಗ್ಗನ್ನು ಚೆನ್ನಾಗಿ ಜಗೆದು ಇಡೀ ಬಾಯಿಯ ಒಳಗೆ ಅದರ ರಸ ತಾಗುವಂತೆ ಜಗೆದು ನುಂಗುತ್ತಿದ್ದರು. ಮತ್ತೆ ನೀರು ಕುಡಿಯಬಾರದು. ಹೀಗೆ ೨,೩ ದಿನ ಮಾಡಿದಾಗ ಬಾಯಿಹುಣ್ಣು ಕಡಿಮೆಯಾಗಿ ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ಆಗಿದ್ದಿತ್ತು! ನಂತರ ಮತ್ತೆ ಮತ್ತೆ ಅದೇ ಪ್ರಯೋಗ ಮಾಡಿದಾಗ ಇದೀಗ ಸುಮಾರು ೧೫ ವರ್ಷಗಳಿಂದ ಬಾಯಿಹುಣ್ಣು ಆಗಿಲ್ಲ!! ಅಂತಹ ದಿವ್ಯೌಷಧವಾಗಿ ಬಿಳಿಕುಸುಮಾಲೆ ಮೊಗ್ಗು ಕೆಲಸ ಮಾಡಿದೆ. ನಾನು ರಾತ್ರಿ ೧೧ಕ್ಕೂ ಬ್ಯಾಟರಿ ತೆಗೆದುಕೊಂಡು ಹೋಗಿ ಪಕ್ಕದ ಮನೆ ಗಿಡದಿಂದ ಈ ಮೊಗ್ಗು ತಂದಿದ್ದಿದೆ!
ಈಗ ನಮ್ಮ ಮನೆಯಲ್ಲಿ ಗಿಡ ಬೆಳೆಸಿದ್ದೇನೆ. ಸಾಕಷ್ಟು ಹೂ ಬಿಡುತ್ತಿದೆ.... ಆದರೆ ಬಾಯಿಹುಣ್ಣು ಮಾಯವಾಗಿದೆ..... ಕುಂಡದಲ್ಲೂ ಆರಾಮಾಗಿ ಈ ಆರೋಗ್ಯದಾಯಿನಿ ಗಿಡ ನೀವೂ ಬೆಳೆಸಿಕೊಳ್ಳಬಹುದು. ಪ್ರಯತ್ನಿಸಿ.....
ನಿಜ. ನನ್ನ ಯಜಮಾನರಾದ ಕೃಷ್ಣಮೂರ್ತಿ ಹೆಬ್ಬಾರರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ. ಯಾರಾದರೂ ಅವರನ್ನು ಕೇಳಿದರೆ ಬಿಡದೇ ಹೇಳುತ್ತಿರುತ್ತಾರೆ! ಓದು, ಅನುಭವ, ಅಭಿನಯ, ಆಟ, ಪಾಠ, ನಾಟಕ, ಕತೆ, ಕವಿತೆ, ಭಾಷಣ, ಭಾಷಾಂತರ, ಬರಹ, ಬದುಕು........ ಹೀಗೇ ಅವರ ಬಳಿ ಹೇಳಿಕೊಳ್ಳಲು ಬಹಳಷ್ಟಿದೆ. ಕೇಳಿದರೆ, ಕರೆದರೆ, ಅವರ ಜೊತೆ ಒಡನಾಡಿದರೆ ಕಲಿಯುವುದು, ತಿಳಿದುಕೊಳ್ಳುವುದು ಬೆಟ್ಟದಷ್ಟಿದೆ. ತಾನಾಗಿ ಅವರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ..... ಕೊಂಚ ತಿಳಿದವರೂ ಇಂದು ಫೇಸ್‌ಬುಕ್, ವಾಟ್ಸಾಪ್, ಯೂಟ್ಯೂಬ್‌ಗಳಂತಹ ಅಂತರ್ಜಾಲ ಮಾಧ್ಯಮ ಅರಿತು ಅಲ್ಲಿ ತಮ್ಮ ಪ್ರತಿಭೆ ತೋರಿಸಿಕೊಳ್ಳುತ್ತಿದ್ದಾರೆ. ಈವರೆಗೂ ಹೆಬ್ಬಾರರು ಒಂದೇ ಒಂದು ಫೇಸ್‌ಬುಕ್ ಪೋಸ್ಟ್, ಯೂಟ್ಯೂಬ್ ವಿಡಿಯೋ ಅಪ್‌ಲೋಡ್ ಕೂಡಾ ಮಾಡಿಲ್ಲ ! ಅವರ ವಾಟ್ಸಾಪ್, ಫೇಸ್‌ಬುಕ್ ಎಕೌಂಟ್, ಯೂಟ್ಯೂಬ್ ಚಾನೆಲ್ ಕೂಡಾ ಮಕ್ಕಳೇ ಮಾಡಿದ್ದು. ಹಲವು ವರ್ಷಗಳ ಹಿಂದೆಮಾಡಿದ ಅವರ ಟಿವಿ ಸಂದರ್ಶನದ ಪ್ರೊಮೋ ಕಂಪ್ಯೂಟರ್ ಕಡತದಲ್ಲಿ ಸಿಕ್ಕಿದ್ದನ್ನು ನಾವು ಫೇಸ್‌ಬುಕ್‌ಗೆ ಮೊನ್ನೆ ಪೋಸ್ಟ್ ಮಾಡಿದಾಗ ಬಂದ ಪ್ರತಿಕ್ರಿಯೆ, ಶುಭಹಾರೈಕೆಗಳನ್ನು ನೋಡಿ ಖುಷಿಯಿಂದ ನಾನು ಅವರ ಬಗ್ಗೆ ಬರೆಯುತ್ತಿದ್ದೇನೆ..... ಬೆಳಿಗ್ಗೆ ಎದ್ದಾಗಿನಿಂದ ವ್ಯಾಯಾಮ-ವಾಕಿಂಗ್ ಎಂದು ಒಂದೂವರೆ ತಾಸು, ಮತ್ತೆ ಮನೆ-ಅಂಗಳ ಕಸ ಗುಡಿಸುವುದು, ತೋಟದ ಕೆಲಸ, ಬಟ್ಟೆತೊಳೆಯುವುದು, ನೀರು ತರುವ...



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ