ಇವತ್ತು ಆಯಿಯ ಆರೋಗ್ಯ ವಿಚಾರಿಸಿದೆ. ನೋವು, ಗ್ಯಾಸ್, ಉರಿ, ಎಸಿಡಿಟಿ...... ಏನೆಲ್ಲ ಇದೆ. ಒಂದಕ್ಕಿಂತ ಒಂದು ಮೇಲೆ !
ಅಂದು ಎಸಿಡಿಟಿಗೆ ಮುರಗಲ ಹಣ್ಣಿನ ಒಣಗಿದ ಸಿಪ್ಪೆಯ ಔಷಧಿ ಹೇಳಿದ್ದೆ. ಅದನ್ನೇ ಮಾಡಿದೆ ಎಂದಳು.
ನನಗೆ ತುಂಬಾ ಎಸಿಡಿಟಿ ಆದಾಗ ವಾಂತಿ ಬಂದಂತೆ ಆದಾಗ, ವಾಂತಿ ಆಗುತ್ತಿದ್ದಾಗ, ತಲೆಸುತ್ತು ಬಂದಾಗ ನಮ್ಮ ಫ್ಯಾಮಿಲಿ ಡಾಕ್ಟರ್ ರಂಗನಾಥ ಪೂಜಾರಿಯವರು ಹೇಳಿದ ಔಷಧಿ ಅದು. ೩,೪ ಮುರುಗಲ ಸಿಪ್ಪೆ ತೊಳೆದು ನೀರಿನಲ್ಲಿ ನೆನೆಸಿ. ೧೦-೧೫ ನಿಮಿಷದ ನಂತರ ಅದನ್ನು ಚೆನ್ನಾಗಿ ಕಿವುಚಿ. ಅದಕ್ಕೆ ಸಿಹಿಯಾಗುವಷ್ಟು ಬೆಲ್ಲ ಸೇರಿಸಿ ಒಂದು ಲೋಟದಷ್ಟು ನೀರು ಹಾಕಿ ಸ್ವಲ್ಪ ಸ್ವಲ್ಪವೇ ಅಂದರೆ ಗುಟುಕು ಗುಟುಕಾಗಿ ಕುಡಿಯಿರಿ ಎಂದಿದ್ದರು. ಇದರಿಂದ ನನಗೆ ಎಸಿಡಿಟಿಯಿಂದ ಮುಕ್ತಿ ದೊರೆತು ಸದಾ ನೆನಪಿಡುವ ಔಷಧಿ ದೊರಕಿತ್ತು. ಇತ್ತೀಚೆಗೆ ನನ್ನ ಕಿರಿಯ ಮಗನಿಗೆ ಅಕಸ್ಮಾತ್ ಅರ್ಧ ತಲೆನೋವು ಬಂದು, ವಾಂತಿ ಬಂದಂತೆ ಆಗಿ ತುಂಬಾ ತೊಂದರೆ ಕೊಡುತ್ತಿತ್ತು. ಅದು ಯಾಕೆ ಬಂತು ಎಂದೇ ತಿಳಿಯಲಿಲ್ಲ. ಗೂಗಲ್ ಹುಡುಕಿದಾಗ ಎಸಿಡಿಟಿಯಿಂದ ಕೂಡಾ ಅರ್ಧ ತಲೆನೋವು ಬರುತ್ತದೆ ಎಂದು ಗೊತ್ತಾಯಿತು. ತಕ್ಷಣ ನೆನಪಾಗಿದ್ದು ಡಾ. ಪೂಜಾರಿಯವರ ಈ ಔಷಧ. ಸರಿ ಪ್ರಯೋಗ ಮಾಡಿದೆ. ಅವನು ಅದನ್ನು ಕುಡಿದು ನಿದ್ದೆ ಮಾಡಿದ್ದ. ಎದ್ದಾಗ ಬೆಳಗಿನಿಂದ ಕಾಡುತ್ತಿದ್ದ ತಲೆನೋವು ಕಡಿಮೆಯಾಗಿತ್ತು! ತುಂಬಾ ಸುಲಭದ, ಆದರೆ ಏನೂ ಅಡ್ಡ ಪರಿಣಾಮವಿಲ್ಲದ ಪರಿಹಾರ ನೀಡಿದ ನಮ್ಮೂರಿನ ಹೆಮ್ಮೆಯ ವೈದ್ಯರಾದ ಡಾ. ಪೂಜಾರಿಯವರಿಗೆ ಮನಸಾ ಅಭಿನಂದಿಸುತ್ತಲೇ ಇರುತ್ತೇನೆ. ಖಾಯಿಲೆಯನ್ನು ಖರಾರುವಕ್ಕಾಗಿ ಗುರುತಿಸಿ ರೋಗಿಗಳಿಗೆ ತಿಳಿಸುವ ಅವರ ರೀತಿ ನಿಜಕ್ಕೂ ಅಪ್ಯಾಯಮಾನ. ಅವರು ಹೇಳಿದ ಇನ್ನಷ್ಟು ಔಷಧಗಳ ಬಗ್ಗೆ ಇನ್ನೊಮ್ಮೆ ಹೇಳುತ್ತೇನೆ.
ಸರ್, ನಿಮಗೊಂದು ಸಲಾಂ.....
ನಿಜ. ನನ್ನ ಯಜಮಾನರಾದ ಕೃಷ್ಣಮೂರ್ತಿ ಹೆಬ್ಬಾರರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ. ಯಾರಾದರೂ ಅವರನ್ನು ಕೇಳಿದರೆ ಬಿಡದೇ ಹೇಳುತ್ತಿರುತ್ತಾರೆ! ಓದು, ಅನುಭವ, ಅಭಿನಯ, ಆಟ, ಪಾಠ, ನಾಟಕ, ಕತೆ, ಕವಿತೆ, ಭಾಷಣ, ಭಾಷಾಂತರ, ಬರಹ, ಬದುಕು........ ಹೀಗೇ ಅವರ ಬಳಿ ಹೇಳಿಕೊಳ್ಳಲು ಬಹಳಷ್ಟಿದೆ. ಕೇಳಿದರೆ, ಕರೆದರೆ, ಅವರ ಜೊತೆ ಒಡನಾಡಿದರೆ ಕಲಿಯುವುದು, ತಿಳಿದುಕೊಳ್ಳುವುದು ಬೆಟ್ಟದಷ್ಟಿದೆ. ತಾನಾಗಿ ಅವರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ..... ಕೊಂಚ ತಿಳಿದವರೂ ಇಂದು ಫೇಸ್ಬುಕ್, ವಾಟ್ಸಾಪ್, ಯೂಟ್ಯೂಬ್ಗಳಂತಹ ಅಂತರ್ಜಾಲ ಮಾಧ್ಯಮ ಅರಿತು ಅಲ್ಲಿ ತಮ್ಮ ಪ್ರತಿಭೆ ತೋರಿಸಿಕೊಳ್ಳುತ್ತಿದ್ದಾರೆ. ಈವರೆಗೂ ಹೆಬ್ಬಾರರು ಒಂದೇ ಒಂದು ಫೇಸ್ಬುಕ್ ಪೋಸ್ಟ್, ಯೂಟ್ಯೂಬ್ ವಿಡಿಯೋ ಅಪ್ಲೋಡ್ ಕೂಡಾ ಮಾಡಿಲ್ಲ ! ಅವರ ವಾಟ್ಸಾಪ್, ಫೇಸ್ಬುಕ್ ಎಕೌಂಟ್, ಯೂಟ್ಯೂಬ್ ಚಾನೆಲ್ ಕೂಡಾ ಮಕ್ಕಳೇ ಮಾಡಿದ್ದು. ಹಲವು ವರ್ಷಗಳ ಹಿಂದೆಮಾಡಿದ ಅವರ ಟಿವಿ ಸಂದರ್ಶನದ ಪ್ರೊಮೋ ಕಂಪ್ಯೂಟರ್ ಕಡತದಲ್ಲಿ ಸಿಕ್ಕಿದ್ದನ್ನು ನಾವು ಫೇಸ್ಬುಕ್ಗೆ ಮೊನ್ನೆ ಪೋಸ್ಟ್ ಮಾಡಿದಾಗ ಬಂದ ಪ್ರತಿಕ್ರಿಯೆ, ಶುಭಹಾರೈಕೆಗಳನ್ನು ನೋಡಿ ಖುಷಿಯಿಂದ ನಾನು ಅವರ ಬಗ್ಗೆ ಬರೆಯುತ್ತಿದ್ದೇನೆ..... ಬೆಳಿಗ್ಗೆ ಎದ್ದಾಗಿನಿಂದ ವ್ಯಾಯಾಮ-ವಾಕಿಂಗ್ ಎಂದು ಒಂದೂವರೆ ತಾಸು, ಮತ್ತೆ ಮನೆ-ಅಂಗಳ ಕಸ ಗುಡಿಸುವುದು, ತೋಟದ ಕೆಲಸ, ಬಟ್ಟೆತೊಳೆಯುವುದು, ನೀರು ತರುವ...

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ