ಅಪ್ಪನ ಮನೆಯ ದನಬಿಡುಹಬ್ಬಕ್ಕೆ(ಗೋವಿನ ಹಬ್ಬ) ಹೋಗಿದ್ದೇ ಅಪರೂಪ. ಮದುವೆಯಾಗಿ ೨೫ ವರ್ಷಗಳಲ್ಲಿ
ಬಹುಶಃ ಎರಡು ಬಾರಿ ಹೋಗಿ ಬಂದಿರಬಹುದು. ಕಾರಣ ಅದೇ ದಿನ ನಮ್ಮ ಮನೆಯಲ್ಲೂ ಗೋವಿನ ಹಬ್ಬ. ನನ್ನ
ಅತ್ತೆ-ಮಾವ ತೀರಿಕೊಂಡ ಮೇಲೆ ಅತ್ತೆಯ ತವರಿನಲ್ಲಿ ಕೊಟ್ಟ ಶಾಸ್ತçದ ‘ಬಸವಿ‘ ಎಂಬ ಆಕಳನ್ನು ೪-೬
ವರ್ಷ ಇತ್ತು. ನಂತರ ಮತ್ತೆ ನಾವು ಕೊಟ್ಟಿಗೆಯ ಸಾಹಸ ಬಿಟ್ಟಾಗಿತ್ತು. ಒಂದು ಕಡೆ ಹೈವೆ.
ಇನ್ನೊಂದೆಡೆ ರೈಲ್ವೆ. ಮೇವಿಗೆ ಬಿಡಲು ಜಾಗವೇ ಇಲ್ಲ. ಅದರಲ್ಲೂ ಆಕಳ ಕಳ್ಳರು ಬೇರೆ. ನಂತರ ಮಾವ
ಗೋವಿನ ಹಬ್ಬದ ದಿನ ರಾತ್ರಿಯೇ ತೀರಿಕೊಂಡ ಕಾರಣ ಪ್ರತಿವರ್ಷ ಅವನ ಶ್ರಾದ್ಧ ಒಮ್ಮೊಮ್ಮೆ ಅದೇ ದಿನ
ಆಗುತ್ತದೆ. ಹೀಗೆಲ್ಲಾ ಆಗಿ ತವರಿನ ಗೋವಿನ ಹಬ್ಬ ಅಪರೂಪದ್ದಾಗಿತ್ತು.
ಮೊನ್ನೆ ಹೋಗಿದ್ದೆ. ನಾವು
ಚಿಕ್ಕವರಿರುವಾಗ ನಮ್ಮದೇ ಪಡಚಾಕರಿ. ಮುಗಿಯದ ಕೆಲಸ ಕಂಡು ಯಾವ ಹಬ್ಬವೂ ಬೇಡ ಅನಿಸುತ್ತಿತ್ತು.
ಯಾಕೆಂದರೆ ೨ ದಿನಗಳ ತಯಾರಿ. ಊಟ-ತಿಂಡಿ ಅಂತ ಬರುವವರ ಸಂಖ್ಯೆಯೂ ಹೆಚ್ಚು. ಆಗೆಲ್ಲ ಕೇರಿಯಲ್ಲಿ
ತುಂಬಾ ಜನರಿದ್ದರು. ಆಯಿಗೆ ಅನಾರೋಗ್ಯವೇ ಹೆಚ್ಚು. ಆದರೂ ಕಷ್ಟಪಟ್ಟು ಎಲ್ಲ ಅಚ್ಚುಕಟ್ಟಾಗೇ
ಮಾಡುತ್ತಿದ್ದಳು. ಅವಳಿಗೆ ನಾವು ಸಹಕಾರ ಕೊಟ್ಟಷ್ಟೂ ಕಡಿಮೆ.
ನಿನ್ನೆ ನಾನು ಹೋಗುವವರೆಗೆ
ಎಕ್ಸಪ್ರೆಸ್ ಅತ್ತಿಗೆಯ ಕೆಲಸ ೯೦% ಮುಗಿದಿತ್ತು. ಪೂಜೆ-ಪುನಸ್ಕಾರಗಳಲ್ಲಿ ‘ಅನುಕೂಲ ಸಿಂಧು’
ಎನ್ನುವ ಮಾತು ಅಣ್ಣನಿಗೆ ಹೊಂದುವುದಿಲ್ಲ. ಅದು ಹೇಗಾದರೂ ಆದರೆ ನಡೆಯುವುದೇ ಇಲ್ಲ. ಆಯಿಯೂ ಆಗಾಗ
ನೆನಪಿಸುವುದೂ ಸೇರಿ, ಅಪ್ಪನ ಕಾಲದಿಂದ ನಡೆದುಬಂದ ಪದ್ಧತಿ ಬಹುಶಃ ಹೆಚ್ಚಿನದು ಅದೇ ರೀತಿ
ಮುಂದುವರಿದಿದೆ. ದೇವರ ಕಾರ್ಯಗಳೆಲ್ಲವೂ ಭಕ್ತಿ ಶ್ರದ್ಧೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ.....
ಕಳೆದ ಬಾರಿ ಕೊಟ್ಟಿಗೆಯಲ್ಲಿ ಓಡಾಡಲೂ ಜಾಗವಿಲ್ಲದಷ್ಟು ದನ-ಕರು-ಎಮ್ಮೆಗಳಿಂದ ಜಾಗ ತುಂಬಿತ್ತು.
ಮೇಯಲು ಬಿಟ್ಟ ಒಂದೆರಡು ಆಕಳು, ಎಮ್ಮೆಕರವನ್ದು ಚಿರತೆ ಹಿಡಿದು, ಕಾಣೆಯಾಗಿ ಅಂತೆಲ್ಲ ಈಗ
ಕೊಟ್ಟಿಗೆ ಸ್ವಲ್ಪ ಬಣಬಣ. ಹಿಂದಿನ ದಿನ ರಾತ್ರಿ ಸ್ನಾನ ಮಾಡಿ ಮಡಿಬಟ್ಟೆಯಲ್ಲಿ ದೋಸೆ ಎರೆದು ಎಲ್ಲ
ಆಕಳಿಗೆ ಕೊಟ್ಟು ಆರತಿ ಎತ್ತಿ ಬರಬೇಕು. ಹಾಗೇ ಹಬ್ಬದ ದಿನ ಬೆಳಿಗ್ಗೆ ಬಾಳೆಪಟ್ಟೆ ಬಳ್ಳಿಯಿಂದ
ಎಲೆ, ಅಡಿಕೆ, ಸಿಂಗಾರ ಹಾಕಿ ಮಾಲೆ ಮಾಡುವುದು, ಪೂಜಾ ಸಾಮಗ್ರಿ ಕೂಡಿಸುವುದು, ಕೊಟ್ಟಿಗೆ ತೊಳೆದು
ಶುಭ್ರಗೊಳಿಸಿ ಆಕಳಿಗೆ ಸ್ನಾನ ಮಾಡಿಸಿ ಮೈಮೇಲೆ ಶೇಡಿ ಹಾಗೇ ಬಣ್ಣದ ಕಾಯಿ ನೀಡು ಮಾಡಿ ‘ಹಂಡುAಡು’
ಹಚ್ಚುವುದು...... ಇವೆಲ್ಲ ಅಣ್ಣನ ಕೆಲಸ. ಅಕ್ಕಿ ನೆನೆಸಿ ಹಸಿ ಅರಿಶಿನ ಕೊಂಬು ಹಾಕಿ ರುಬ್ಬಿ
ದೋಸೆ ಎರೆಯುವುದು. ಮನೆಯನ್ನು ಸ್ವಚ್ಛ ಮಾಡಿ ಮಧ್ಯಾಹ್ನ ಅಥವಾ ಸಂಜೆ ಊಟಕ್ಕೆ, ತಿಂಡಿಗೆ ಬರುವ
ಅಕ್ಕ-ಪಕ್ಕದವರಿಗೆ ೫-೬ ಬಗೆಯ ಅಡುಗೆ, ಬಾಳೆ ಹಣ್ಣಿ ಪಾಯಸ, ಎಲ್ಲರಿಗೂ ಹಳದಿಯ ದೋಸೆ; ಹಾಗೇ ಎಲ್ಲ
ಆಕಳಿಗೂ ಕೊಡುವಷ್ಟು ಅಕ್ಕಿ ಬೇಯಿಸಿ ಅನ್ನ ಮಾಡಿ ಅದಕ್ಕೆ ಹೆಚ್ಚಿದ ಬಾಳೆಹಣ್ಣು, ಕಾಯಿತುರಿ, ಎರೆದ
ದೋಸೆಯ ಚೂರು ಸೇರಿಸಿ ‘ಗೋಗ್ರಾಸ’ಮಾಡುವುದು....... ಇವೆಲ್ಲ ಸ್ನಾನ ಮಾಡಿ ಮಡಿಬಟ್ಟೆ ಹಾಕಿಕೊಂಡು
ಅತ್ತಿಗೆಯ ಕೆಲಸ...... ಇವರಿಗೆ ನನ್ನ ಆಯಿ, ಅತ್ತಿಗೆ ಆಯಿಯ ಚಿಕ್ಕಪುಟ್ಟ ಸಹಕಾರ ಹಾಗೂ ಪ್ರತಿದಿನ
ತೋಟಪಟ್ಟಿಯ ಕೆಲಸಕ್ಕೆ ಬರುವ ಹಾಲಕ್ಕಿ ದುರ್ಗಿಯ ಸಹಕಾರ. ಅವಳೂ ತುಂಬಾ ಫಾಸ್ಟ್. ನಾನು ಅವಳಿಗೆ
‘ದುರ್ಗಾಂಬಾ ಎಕ್ಸಪ್ರೆಸ್’ ಎಂದೇ ಕರೆಯುವುದು. ಇಷ್ಟೆಲ್ಲಾ ಮಾಡಿ ಹಾಗೇ ದೇವರ ಪೂಜೆ ಮುಗಿಸಿ
ಗೋಪೂಜೆಗೆ ಕೊಟ್ಟಿಗೆಗೆ ಹೋಗುವಾಗ ಮಧ್ಯಾಹ್ನ ೧ ಗಂಟೆ ಆಗಿತ್ತು. ದೇವರ ಮನೆಯಿಂದ ದೀಪ ಹಚ್ಚಿ
ಕೊಟ್ಟಿಗೆಗೆ ಒಯ್ದು ದೀಪ ಆರದಂತೆ ಕಾದು; ಮತ್ತೆ ಮನೆಗೆ ಮುಟ್ಟಿಸುವ ಬಗ್ಗೆ ಆಯಿಯ
ಕಾಳಜಿಯಾಗಿತ್ತು. ಹಾಗೇ ಒಂದು ತುಪ್ಪದ ದೀಪ ಕೂಡಾ ಕೊಟ್ಟಿಗೆಯಲ್ಲಿ ಹಚ್ಚಿಡಬೇಕು. ಪೂಜಾ
ವಿಧಾನಗಳನ್ನೆಲ್ಲ ಮಾಡಿ ಅಣ್ಣ ಗೋವಿಗೆ ಆರತಿ ಬೆಳಗಿದ. ಅತ್ತಿಗೆ ಅರಿಶಿನ ಕುಂಕುಮ ಹಚ್ಚಿದಳು.
ಹಾಗೇ ಕುತ್ತಿಗೆಗೆ ಅಡಿಕೆ-ಸಿಂಗಾರದ ಸರ ಇಬ್ಬರೂ ಸೇರಿ ಕಟ್ಟಿದರು. ಕಟ್ಟಲು ಕೊಡದೆ ಒಂದೆರಡು
ಆಕಳು, ಎಮ್ಮೆ ಎಲ್ಲ ಒಂದೇ ಸಮನೆ ತಲೆ ಅಲ್ಲಾಡಿಸಿ ಮಕ್ಕಳಂತೆ ಹಠ ಮಾಡುತ್ತಿದ್ದರು. ಅಂತೂ ಆ
ಪ್ರಯತ್ನ ಮುಗಿಸಿ ತಿರುಗುವವರೆಗೆ ಒಬ್ಬರಿಗೊಬ್ಬರು ಹರಿದು ತಿನ್ನತೊಡಗಿದರು. ನಂತರ ಅವರಿಗೆಂದೇ
ಮಾಡಿದ ಗೋಗ್ರಾಸ ಪಾತ್ರೆಯಲ್ಲಿ ಹಾಕಿ ಎಲ್ಲರಿಗೂ ಬೇರೆ ಬೇರೆ ಕೊಟ್ಟರು. ಎಷ್ಟೇ ಕೊಟ್ಟರೂ
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬAತೆ ಮಾಡಲು ೨ ತಾಸು ತಗಲಿದ್ದರೆ ಅವರಿಗೆ ೨ ನಿಮಿಷದಲ್ಲಿ
ತಿಂದು ಮುಗಿದಿತ್ತು ! ಮತ್ತೂ ಬೇಕೆಂದು ಕುಣಿದಾಡುತ್ತಿದ್ದರು!! ಅಂತೂ ಅವರ ಬಾಯಿ ತೊಳೆಸುವ
ಶಾಸ್ತç ಮಾಡಿ ಕೈಮುಗಿದು ಪೂಜಾ ಸಾಮಗ್ರಿ ಬದಿಗಿಟ್ಟು ಅವರನ್ನು ಹಗ್ಗ ಬಿಚ್ಚಿ ಬಿಡಲು ಹೊರಟರೆ
ಅಲ್ಲೂ ಕೊಸರಾಟ. ಬಿಟ್ಟರೆ ದುರ್ಗಿ ಹೊರಗೆ ನಿಂತು ಪ್ರಸಾದವೆಂಬAತೆ ಅವರ ಕುತ್ತಿಗೆಯ ಹೂವು ಅಡಿಕೆ
ಎಳೆದು ತೆಗೆಯುವ ಪದ್ಧತಿ. ಅವರು ತಪ್ಪಿಸಿಕೊಂಡು ಓಡುತ್ತಿದ್ದರು. ಜಮಟೆ ಬಡಿದು ಓಡಿಸಿದರೆ ಹೊರಗೆ
ಓಡಿ ಮತ್ತೆ ಒಳಗೆ ಬಂದು ಅಂತೂ ಅವರನ್ನು ವೋಣಜಿಯಲ್ಲಿ ಓಡಿಸಿ ಗೇಟು ದಾಟಿಸುವಲ್ಲಿ ದುರ್ಗಿ
ಸಫಲಳಾಗಿ ಕೊಟ್ಟಿಗೆ ಸ್ವಚ್ಛ ಮಾಡತೊಡಗಿದಳು..... ಮಕ್ಕಳೂ ಈ ಸಂದರ್ಭದಲ್ಲಿ ಮನೆಯಲ್ಲಿದ್ದರೆ
ಹಬ್ಬದ ಮಜವೇ ಬೇರೆಯಾಗುತ್ತಿತ್ತು..... ಅಲ್ಲಿಗೆ ೨ ಗಂಟೆ ಆಗಿತ್ತು. ಆಕಳ ಕೊರಳಿಗೆ ಕಟ್ಟಿದ
ಮಾಲೆಯ ಎರಡು ಮಾಲೆ ಉಳಿಸಿಕೊಂಡು ವಾಪಸ್ ಮನೆಗೆ ಪ್ರಸಾದವೆಂದು ತಂದು ಮಜ್ಜಿಗೆ ಕಡಗಲು(ಕುಡಗೋಲು)
ಹಾಗೂ ಮನೆಯ ಕೋಳುಕಂಬಕ್ಕೆ ಕಟ್ಟುವ ಪದ್ಧತಿ. ಆದರೆ ಈಗೀಗ ಮಜ್ಜಿಗೆ ಮಿಶನ್ ಕಡೆಯುವುದರಿಂದ, ಅಣ್ಣ
ಉಳಿದಿರುವ ಹಳೆಯ ಕಡಗಲುಗುಟ್ಟಕ್ಕೆ ಮಾಲೆ ಕಟ್ಟಿದ್ದ. ಆಯಿ, ಶೀರೂರಜ್ಜಿ, ಕಣ್ಣು ಕಾಣದ ಅಜ್ಜಿ
ಎಲ್ಲರೂ ಕಡೆಯುತ್ತಿದ್ದ ದೊಡ್ಡ ಕಡಗಲು ತುಂಬಾ ನೆನಪಾಗಿತ್ತು....... ಮತ್ತೆ ಮನೆಗೆ ಅಕ್ಕ-ಪಕ್ಕದ
ನಾಲ್ಕಾರು ಜನ ಬಂದಿದ್ದರು. ಅವರೆಲ್ಲರಿಗೆ ಊಟ ಹಾಕಿ ಕೆಲಸ ಮುಗಿಸುವಾಗ ೪ ಗಂಟೆ ಆಗಿತ್ತು.
ಬೆಂಗಳೂರಿನಲ್ಲಿದ್ದ ಅಣ್ಣನ ಮಾವನ ಮನೆಯಲ್ಲಿ ಅದೇ ದಿನ ಮದುವೆ. ಬೆಳಗಿಂದ ಒಂದೇಸಮನೆ ಕೆಲಸಮಾಡಿದರೂ
ಮತ್ತೆ ಅದೇ ಜೋಶ್‌ನಲ್ಲಿದ್ದ ಅತ್ತಿಗೆ - ಅಣ್ಣನ ಜೊತೆ ನೆಂಟರ ಮನೆಯ ಮದುವೆಗೆ ಸಂಜೆಯ
ಗೃಹಪ್ರವೇಶಕ್ಕೆ ಅಣ್ಣನ ಮಗಳು ಹರಿಣಿ ಜೊತೆ ಅಚ್ಚ ಹಸಿರಿನ ದಾರಿಯ ನಡುವೆ ಪುಟ್ಟ ಪ್ರವಾಸದಂತೆ
ಹೋಗಿ ಬಂದೆವು. ಅಲ್ಲಿ ಹಳೆಯ ಮನೆಯ ಮೂಲೆಯಲ್ಲಿ ಹೋದ ಕ್ಷಣದಲ್ಲಿ ಕಂಡ;ಅತ್ತಿಗೆಯ ಅಪ್ಪನ ಕೈಯಲ್ಲೇ
ತಯಾರಾದ ಅಚ್ಚುಕಟ್ಟಾದ ಕಡಗಲು ನೋಡಿ ತುಂಬಾ ಖುಷಿಯಾಯ್ತು....
- ಶ್ರೀಮತಿ ರೇಖಾ ಕೆ. ಹೆಬ್ಬಾರ್
ನಿಜ. ನನ್ನ ಯಜಮಾನರಾದ ಕೃಷ್ಣಮೂರ್ತಿ ಹೆಬ್ಬಾರರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ. ಯಾರಾದರೂ ಅವರನ್ನು ಕೇಳಿದರೆ ಬಿಡದೇ ಹೇಳುತ್ತಿರುತ್ತಾರೆ! ಓದು, ಅನುಭವ, ಅಭಿನಯ, ಆಟ, ಪಾಠ, ನಾಟಕ, ಕತೆ, ಕವಿತೆ, ಭಾಷಣ, ಭಾಷಾಂತರ, ಬರಹ, ಬದುಕು........ ಹೀಗೇ ಅವರ ಬಳಿ ಹೇಳಿಕೊಳ್ಳಲು ಬಹಳಷ್ಟಿದೆ. ಕೇಳಿದರೆ, ಕರೆದರೆ, ಅವರ ಜೊತೆ ಒಡನಾಡಿದರೆ ಕಲಿಯುವುದು, ತಿಳಿದುಕೊಳ್ಳುವುದು ಬೆಟ್ಟದಷ್ಟಿದೆ. ತಾನಾಗಿ ಅವರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ..... ಕೊಂಚ ತಿಳಿದವರೂ ಇಂದು ಫೇಸ್‌ಬುಕ್, ವಾಟ್ಸಾಪ್, ಯೂಟ್ಯೂಬ್‌ಗಳಂತಹ ಅಂತರ್ಜಾಲ ಮಾಧ್ಯಮ ಅರಿತು ಅಲ್ಲಿ ತಮ್ಮ ಪ್ರತಿಭೆ ತೋರಿಸಿಕೊಳ್ಳುತ್ತಿದ್ದಾರೆ. ಈವರೆಗೂ ಹೆಬ್ಬಾರರು ಒಂದೇ ಒಂದು ಫೇಸ್‌ಬುಕ್ ಪೋಸ್ಟ್, ಯೂಟ್ಯೂಬ್ ವಿಡಿಯೋ ಅಪ್‌ಲೋಡ್ ಕೂಡಾ ಮಾಡಿಲ್ಲ ! ಅವರ ವಾಟ್ಸಾಪ್, ಫೇಸ್‌ಬುಕ್ ಎಕೌಂಟ್, ಯೂಟ್ಯೂಬ್ ಚಾನೆಲ್ ಕೂಡಾ ಮಕ್ಕಳೇ ಮಾಡಿದ್ದು. ಹಲವು ವರ್ಷಗಳ ಹಿಂದೆಮಾಡಿದ ಅವರ ಟಿವಿ ಸಂದರ್ಶನದ ಪ್ರೊಮೋ ಕಂಪ್ಯೂಟರ್ ಕಡತದಲ್ಲಿ ಸಿಕ್ಕಿದ್ದನ್ನು ನಾವು ಫೇಸ್‌ಬುಕ್‌ಗೆ ಮೊನ್ನೆ ಪೋಸ್ಟ್ ಮಾಡಿದಾಗ ಬಂದ ಪ್ರತಿಕ್ರಿಯೆ, ಶುಭಹಾರೈಕೆಗಳನ್ನು ನೋಡಿ ಖುಷಿಯಿಂದ ನಾನು ಅವರ ಬಗ್ಗೆ ಬರೆಯುತ್ತಿದ್ದೇನೆ..... ಬೆಳಿಗ್ಗೆ ಎದ್ದಾಗಿನಿಂದ ವ್ಯಾಯಾಮ-ವಾಕಿಂಗ್ ಎಂದು ಒಂದೂವರೆ ತಾಸು, ಮತ್ತೆ ಮನೆ-ಅಂಗಳ ಕಸ ಗುಡಿಸುವುದು, ತೋಟದ ಕೆಲಸ, ಬಟ್ಟೆತೊಳೆಯುವುದು, ನೀರು ತರುವ...

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ